Tuesday, August 4, 2009

ಪರಸ್ಪರ

ನನ್ನ ಹೊಸ ಕವಿತೆಗಳನ್ನ, ಮತ್ತು ಆಗಾಗ ಬರೆವ ಲೇಖನಗಳನ್ನ ಸಾಹಿತ್ಯಾಭಿಮಾನಿಗಳ ಗಮನಕ್ಕೆ ತರಬೇಕೆಂಬ ಅಪೇಕ್ಷೆಯಿಂದ "ಪರಸ್ಪರ" ಪ್ರಾರಂಭವಾಗಿದೆ. ಕಾವ್ಯಾಭಿಮಾನಿಗಳು ತಮ್ಮ ಸ್ಪಂದನ ತಿಳಿಸಿದರೆ ತುಂಬ ಸಂತೋಷವಾಗುವುದು. ಉತ್ತರಾಯಣ ಪದ್ಯವನ್ನು ನನ್ನ ಅನಿವಾಸೀಭಾರತೀಯ ಗೆಳೆಯರು ಓದಬೇಕೆಂದು ಅಪೇಕ್ಷೆ ಪಟ್ಟರು. ಅವರಿಗೆಲ್ಲ ಕೃತಿಯನ್ನು ಕಳಿಸುವುದು ಸಾಧ್ಯವಾಗಲಿಲ್ಲ. ಈಗ ಪರಸ್ಪರದ ಮೂಲಕ ನನ್ನ ದೂರದ ಗೆಳೆಯರಿಗೂ ಈ ಕವಿತೆ ಓದಿಸುವುದು ಸಾಧ್ಯವಾಗುತ್ತಿದೆ. ನನ್ನ ಪತ್ನಿ ಅಕಾಲಿಕ ಮರಣಕ್ಕೆ ತುತ್ತಾದಾಗ ಬರೆದ ಪದ್ಯ ಇದು. ಬದುಕು ಮತ್ತು ಸಾವಿನ ಬಗ್ಗೆ ಚಿಂತಿಸುವ ಈ ಪದ್ಯದ ಬಗ್ಗೆ ನನ್ನ ಹೊಸ ಮಿತ್ರರ ಅನಿಸಿಕೆ ತಿಳಿಯಲು ಕುತೂಹಲವಿದೆ.-ಎಚ್.ಎಸ್.ವಿ.

4 comments:

  1. ನಮಸ್ಕಾರ ಸರ್,
    ಈ ’ಪರಸ್ಪರ’ ನನ್ನ ಪಾಲಿಗೆ ಅಲ್ಪನಿಗೆ ಐಷ್ವರ್ಯ ಸಿಕ್ಕ೦ತಾಗಿದೆ.... ನಾನು ಕನಸಿನಲ್ಲು ನೆನಸಿರಲಿಲ್ಲ... ಈ ಥರದ ಭಾಗ್ಯ ಸಿಗುತ್ತೆ ಅ೦ತ ...
    ಸದಾ ನನ್ನ ಕಾಡುವ ನಿಮ್ಮ ಕವಿತೆಯ ಸಾಲುಗಳು

    ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ , ಒ೦ದಾದರು ಉಳಿಯಿತೇ ಕನ್ನಡಿಯಾ ಪಾಲಿಗೆ.....

    ಯಾವ ಸೆರಗ ಒದ್ದೆ ಅ೦ಚು .....

    ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವಾ.....

    ಪಾತ್ರವಿರದ ತೊರೆ ಪ್ರೀತಿ...

    ನುಡಿಸಬೇಡಿ ಮತ್ತೆ ಕೊಳಲು ಚಿಮ್ಮಬಹುದು ಒಳಗಿನಳಲು..... ಇನ್ನೂ ಅದೆಷ್ಟೋ....

    ಓದಿದವರು ಭಾವುಕರಾಗದಿರಿರುವುದೇ ಇಲ್ಲ

    ReplyDelete
  2. ಸರ್
    ನೀವು ಬ್ಲಾಗ್ ಲೋಕಕ್ಕೆ ಬಂದಿದ್ದು ನನ್ನಂಥವರಿಗೆ ಬಹುದೊಡ್ಡ ಖುಷಿಯ ಸ೦ಗತಿ. ನನ್ನದು ಒಂದು ಬ್ಲಾಗಿದೆ. ದಯವಿಟ್ಟು ಭೇಟಿ ಕೊಡಿ, ಹೊಸತೊಂದು ಕವನ ಹಾಕಿದ್ದೇನೆ. ನೋಡಿ, ವಿಮರ್ಶಿಸಿ, ತಪ್ಪುಗಳನ್ನು ತಿಳಿ ಹೇಳಿ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ.

    ಪರಾ೦ಜಪೆ
    http://www.nirpars.blogspot.com/

    ReplyDelete
  3. ಸರ್ ನಿಮ್ಮ ಕವನಗಳನ್ನು ಅತೀವ ಆಸ್ಥೆಯಿಂದ ಓದುತ್ತಿರುವವನು ನಾನು.ನೀವು ಬ್ಲಾಗ್ ಮುಖಾಂತರ ಸಹೃದಯರನ್ನ ತಲುಪಲು ನಿರ್ಧಾರ ಮಾಡಿ ಕಾರ್ಯ ಮಗ್ನರಾಗಿರುವುದು ನನಗೆ ನನ್ನತ ಓದುಗರಿಗೆ ಸಂತಸದ ವಿಷಯ..ನಾನು ಮೈಸೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿದ್ದೇನೆ ಸರ್ ಬಿಡುವಾದಾಗ ಒಮ್ಮೆ ನನ್ನ ಬ್ಲಾಗ್ ನೋಡಿ ನಿಮ್ಮ ಎರೆದು ಮಾತು ತಿಳಿಸಿ ದಯಮಾಡಿ...sahayaatri.blogspot.com

    ReplyDelete
  4. Padya thumbaa chennagide- Samartha/Surya/Samhitha/Sowkhya/Skanda

    ReplyDelete